"...ಮರಗಳ ಕೊಂಬೆಗಳು ಕೊಟ್ಟ ರೂಪಕ್ಕೆ ಬಿಸಿಲು ಪಡೆಯುವ ರಂಗವಲ್ಲಿಯಂತೆಯೇ ಸದ್ಯಕ್ಕೆ ಇರಲಿ ಮನಸ್ಸು, ನಿರಂಬಳ ತೆರೆದುಬಿಡಲಿ. ಗಗನದಲ್ಲಿ ಬೆಳಕು, ಮರದ ಕೆಳಗೆ ನೆರಳು, ನೆಲದ ಮೇಲೆ ರಂಗವಲ್ಲಿ. ಭಾಗ್ಯವಿದ್ದು ತುಂತುರಿನ ಸ್ಪರ್ಶವಾದರೆ ಕಾಮನಬಿಲ್ಲು. ಜೀವ ಬಿಸಿಲಿನಂತಿದ್ದುಬಿಡಬೇಕು. ಬರಿಯ ಒಂದು ಎಚ್ಚರವಾಗಿ, ಬರಿಯ ಒಂದು ಅಚ್ಚರಿಯಾಗಿ. ಆಕಾಶದಲ್ಲಿ ರೆಕ್ಕೆಗಳನ್ನು ಹರಡಿ ಸ್ತಬ್ದ, ತೃಪ್ತ ತೇಲುವ ಗರುಡನಂತೆ."
— ಸಂಸ್ಕಾರ , URA.




